Posts

ವಿಶ್ವ ಮಹಿಳಾ ದಿನಾಚರಣೆ

 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಮಗುವನ್ನು ಹಡೆದು ತಾಯಿಯಾಗಿ ಮಾರ್ಗದರ್ಶಿಯಾದೆ, ಕುಟುಂಬದ ಆರತಿ ಬೆಳಗುವ ಮಗಳಾದೆ, ಸಹೋದರನಿಗೆ ನೆಚ್ಚಿನ ಸಹೋದರಿಯಾದೆ, ನೊಂದ ಹೃದಯಕ್ಕೆ ಕಣ್ಣಿರೋರೆಸುವ ಗೆಳತಿಯಾದೆ. ಪತಿಗೆ ಪ್ರಿಯ ಸತಿಯಾದೆ, ಪ್ರಿಯಕರನಿಗೆ ಜೀವದ ಗೆಳತಿಯಾದೆ, ಅಪೂರ್ಣತೆಯ ಪುರುಷನಿಗೆ ಪರಿಪೂರ್ಣತೆಯ ಆಗರವಾದೆ, ಸರ್ವ ಕ್ಷೇತ್ರಗಳಲ್ಲಿ ಸರ್ವ ಸ್ಥಾನಗಳಲ್ಲಿ ಅಲಂಕೃತವಾಗಿ ಸಾಧನೆಯ ಪ್ರತೀಕವಾದೆ. ### ಹೆಣ್ಣಿನ ಸ್ಥಾನವನ್ನು ಹೆಣ್ಣೇ ತುಂಬಲು ಸಶಕ್ತಳು! ಹೆತ್ತ ಕರುಳ ಬಳ್ಳಿಯಾಗಿ ಒಲವಿನ ಲತೆಯಾಗಿ ಭರವಸೆಯ ಬೆಳಕಾಗಿ ಗೆಲುವಿನ ಸಾರಥಿಯಾಗಿ ಸರ್ವ ಕ್ಷೇತ್ರಗಳಲ್ಲಿ ಸರ್ವ ಸ್ಥಾನಗಳಲ್ಲಿ ಅಲಂಕೃತವಾಗಿ ಸಾಧನೆಯ ಪ್ರತೀಕವಾದೆ. ಅಪೂರ್ಣತೆಗೆ ಪರಿಪೂರ್ಣತೆಯ ನೀಡುವ ಎಲ್ಲಾ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು🌼🙏😇😃 ✍️ ವಜ್ರದಂತ

ಶೀರ್ಷಿಕೆ : ಆತ್ಮಲಿಂಗ

 ರಾವಣನ ತಾಯಿ ಕೈಕಸಿ ಕಟ್ಟಾ ಶಿವಭಕ್ತೆ, ಸಮೃದ್ಧಿಗಾಗಿ ಪೂಜಿಸುತ್ತಿದ್ದಳು ಶಿವಲಿಂಗ, ಅಸೂಹೆಗೊಂಡ ಇಂದ್ರನು ಕದ್ದು ಸಮುದ್ರಕ್ಕೆಸೆದ ಆ ಶಿವಲಿಂಗ, ವಿಚಾಲಿತಳಾದ ಕೈಕಸಿ ಅಚಾರಿಸಿದಳು ಕಠಿಣ ಉಪವಾಸ, ಶಪಥಗೈದ ರಾವಣನು ಆತ್ಮಲಿಂಗವನ್ನರಸಿ ನಡೆದನು ಕೈಲಾಸ. ಅತಿಯಾಸೆಯಲ್ಲಿ ದಶಗ್ರೀವನು ತೋಳ್ಬಲವನ್ ಉಪಯೋಗಿಸಿ,  ೨೦ ತೋಳ್ಗಳಿಂದ ಕೈಲಾಸವನ್ ಸರಿಸುವೆಯೆಂದು ಭ್ರಮಿಸಿ, ಮುಕ್ಕಣ್ಣನ ಕೋಪಕೆ ಪರಿತಪಿಸಿ, ಕಾಡಿ-ಬೇಡಿದನು ಸದಾ ಶಿವನ ತಪಸ್ಸಚರಿಸಿ-ರೋಧಿಸಿ. ಒಲಿಯದ ಶಿವನ ಓಲೈಸಲು ತನ್ನ ಚರ್ಮ ಮತ್ತು ಕರುಳನ್ನೇ ವೀಣೆಯನ್ನಾಗಿಸಿ, ಶಿವ ತಾಂಡವ ಸ್ತೋತ್ರವನ್ನು ರಚಿಸಿ, ಮಧುರ ಕಂಠದಲ್ಲಿ ಸ್ತುತಿಸಿ, ಆತ್ಮಲಿಂಗವ ಪಡೆದುನಡೆದ ಭೋಳ ಶಂಕರನ  ಪ್ರಸನ್ನಗೊಳಿಸಿ. ದೇವತೆಗಳಿಗೆ ಆತ್ಮಲಿಂಗದ ಶಕ್ತಿಯೊಡನೆ ನಿಬಂಧನೆಯ ತಿಳಿಸಿದ ನಾರದರ ಸ್ವರ, ಹಾದಿಯಲ್ಲಿ (ಮುಸ್ಸಂಜೆ)ಮಾಯೆಯ ಸೂತ್ರಧಾರಿಗಳು ವಿಷ್ಣು-ಭಾಸ್ಕರ, ವಿಘ್ನವನ್ನುಂಟುಮಾಡಲು ಸಜ್ಜಾದ ವಿಘ್ನೇಶ್ವರ, ರಾವಣನು ಸಂಧ್ಯಾವಂದನೆಯನ್ನಾಚರಿಸಲು ಪಟ್ಟನು ಆತುರ. ಗೋಚರಿಸಿದ ಬ್ರಾಹ್ಮಣ ವಟುವಿನ ವೇಷದಲ್ಲಿ ಗಜಾನನ, ಆತ್ಮಲಿಂಗವ ಭುವಿಗೆ ಸೋಕದಂತೆ ತಿಳಿಸಿದ ದಶಾನನ, ಯುಕ್ತಿಯ ದಶೆಯಲ್ಲಿ ಆತ್ಮಲಿಂಗ ಭಾರವೆಂದು ನೆಪ, ರಾವಣನಿಗೆ ಅವಸರದಲ್ಲಿ ಆಚರಿಸಬೇಕಾದ ಸಂಧ್ಯಾವಂದನೆಯ ಜಪ. ಗಣಪನು ನೀಡಿದ ೩ ಕೂಗಿಗೆ ಭಾರವನ್ನು ಇಳಿಸುವ ಸೂಚನೆ, ರಾವಣನನು ಅರ್ಘ್ಯವನ್ನು ಬಿಡುವ ಕ್ಷಣ, ವಿನಾಯಕನ ಕೈಯಿಂದ ಭೂಸ್ಪರ್ಶಿಸಿದ ಆತ್ಮಲಿಂಗ, ಆಯಿತದ
ಕಡೆಗಣಿಸಬೇಡ ಗೆಳತಿ, ಓ ನನ್ನ ಹೃದಯದ ಒಡತಿ! ಪ್ರೀತಿಯ ಕುಸುಮವರಳಿದ ಹೊತ್ತು, ನೀ ನಲಿದು ತಾ ಪ್ರೀತಿಯ ಮುತ್ತು! ಸಮಯವು ಸರಿದಿದೆ, ನಿನ್ನ ಕಾಯುತ್ತಾ ಕುಳಿತಾಗ ಪ್ರೀತಿಯು ಮೂಡಿದೆ, ನಿನ್ನ ಮನವನು ಅರಿತಾಗ! ಅರಸಿ ಬಂದ ಮನವ ತಿರಸ್ಕರಿಸದಿರು ಸಾವಿನ ದವಡೆಗೆ ಸಿಲುಕಿಸದಿರು! ಅರಿಯಲು ಮನವಿದೆ ಮಾತು ಬಾಕಿಯಾಗಿಯೇ ಉಳಿದಿದೆ! ಅರಿಯದೇ ಕಂಡಿತೇ ಮನವು? ನುಡಿಯದೇ ಮೂಡಿತೇ ಒಲವು?! ಕಂಗಳ ಮಾತಾದು, ಇತರರಿಗರಿಯದು! ಹೃದಯದ ಭಾವ, ನಿನಗಾಗಿ ಕಾದಿದೆ ಈ ಜೀವ! ಭಾವದ ಪುಟದಲ್ಲಿ, ಪ್ರೀತಿಯ ಮೂಡಿಸಿ ಸಿಹಿ ನೆನಪನುಣಿಸಿ ತಿರುಗಿ ಹೋಗದಿರು ತ್ಯಜಿಸಿ! #ಹಾಗೇ ಸುಮ್ಮನೆ, ಒಂದು ಭಾವ ಪ್ರಯೋಗ ✍️ ವಜ್ರದಂತ

ಶೀರ್ಷಿಕೆ : ಹೇ ಜೀವಿ, ನೀನೊಂದು ಪ್ರಭಾವಿ

ರೂಪದಲ್ಲಿ ಕಿರಿದಾದರೂ ನಿನ್ನ ಕೀರ್ತಿ ದೊಡ್ಡದು... ಹಾಡುವ ಹಾಡು ಹಳೆದಾದರೂ ಕೇಳುವ ಪಾಡು ಹೊಸತು... ಆರಕ್ಷಕರಿದ್ದರೂ ಕೋಟೆಗೆ ನುಗ್ಗಿ ಕನ್ನ ಹಾಕಿದ ಚೋರ! ಸಿಹಿ ಕನಸಿಗೆ ಹುಳಿ ಹಿಂಡಿ ಮಾಡುವೆ ನಿದಿರೆಯ ದೂರ ದೂರ... ಗಾನ ಗಂಧರ್ವರಿಗಿಂತ ನೀನೇನು ಕಡಿಮೆಯಿಲ್ಲ! ಬಾರದ ನಿದಿರೆಗೆ ಕಾಯ್ದಿರಿಸುವಾಗ ನಿನ್ನ ಜೋಕಾಲಿ ಹಾಡು ಕಿರಿಕಿರಿಯಾಯಿತಲ್ಲ.! ನಿದಿರೆಯ ಸಾಂಗತ್ಯದಲ್ಲಿ ಅಪ್ರತಿಮ ಸಾಧನೆ ತೋರುವೆಯೇಕೆ? ಪವಿತ್ರ ನಿದ್ರೆಗೆ ಭಂಗ ತಂದು ಜೀವವ ಕಳೆದುಕೊಳ್ಳುವೆಯೇಕೆ? ನಿನಗೆ ಹೆದರದಿರುವ ಜನರಿಲ್ಲ! ನಿನ್ನ ಬೆದರಿಕೆಗೆ ಬಗ್ಗಿ ನಿನ್ನ ಕೊಲ್ಲುವರೆಲ್ಲ! ಕಚ್ಚಿದ ಹೆಣ್ಣು, ಕೆರೆದ ಭಾಗವದು ಹುಣ್ಣು; ಹಗಲಿನಲ್ಲಿ ರಕ್ತ ಹಿರಿದಾಗ, ತರುವುದು ರೋಗ! #ಸೊಳ್ಳೆ ✍️ ವಜ್ರದಂತ

ಅಕ್ಷಯ ತೃತೀಯ

ವೈಶಾಖ ಮಾಸದ ಶುಕ್ಲಪಕ್ಷದ ಅಕ್ಷಯ ತೃತೀಯ ಶ್ರೀ ಬಸವೇಶ್ವರರ ಜನ್ಮದಿನದ ಧನ್ಯದಿನ ಶ್ರೀ ಪರಶುರಾಮರ ಜಯಂತಿಯ ಧೀರದಿನ! ಶ್ರೀಕೃಷ್ಣರ ಅಗ್ರಜರಾದ ಬಲರಾಮರು ಜನಿಸಿದ ಸುದಿನ. ಇಂದೇ, ಶ್ರೀ ಮಹಾಗಣಪತಿಯಿಂದ ಮಹಾಭಾರತದ ರಚನೆಗೆ ನಾಂದಿ ಹಾಡಿದ ಮೂಲದಿನ ಗಂಗೆಯ ಶಾಪ ಕಳೆದು ಜಟಾಧಾರನ ಜಟೆಯಿಂಧುಮುಕಿ ಭೂಮಿಗಿಳಿದ ಸುದಿನ ಸೂರ್ಯದೇವನಿಂದ ಪಾಂಡವರಿಗೆ ಪ್ರಾಪ್ತವಾಯಿತು ಅಕ್ಷಯ ಪಾತ್ರೆ ಶ್ರೀಕೃಷ್ಣರಿಂದ ಸುಧಾಮನಿಗೆ ದಾರಿದ್ರ್ಯ ದೂರವಾದುದ್ದು ಚರಿತ್ರೆ. ವರ್ಷದ ಮೂರೂವರೆ ಪವಿತ್ರದಿನಗಳಲ್ಲೊಂದು ಈ ಅಕ್ಷಯ ತೃತೀಯ ಉತ್ತಮ ಕಾರ್ಯಗಳ ಕಾರ್ಯಾಭಿವೃದ್ದಿಗೆ ದಿನಾದೀದ್ವಿತೀಯ ಧಾನ ಧರ್ಮಗಳು ಮಾಡುವುದೇ ಹಬ್ಬದ ಮೂಲೋಧ್ಯೇಯ. ಇಂದು ತ್ರೇತ್ರಾಯುಗದ ಆರಂಭ ದಿನವೆಂಬ ನಂಬಿಕೆ; ಖರೀದಿಸುವ ಚಿನ್ನಕ್ಕಿಲ್ಲ ವೈಶಿಷ್ಟ್ಯ , ಇದು ಕೆಲವು ವರ್ಷಗಳಿಂದ ಆಚರಿಸುತ್ತಾ ಬಂದಿರುವ ವಾಡಿಕೆ! ✍️ ವಜ್ರದಂತ
ಬೇಸಿಗೆಯನ್ನೇ ಮರೆಸಿ ಬಾನಲ್ಲಿ, ಭ್ರಾಂತಿಯ ಮೆರೆಸಿ ಭುವಿಗೆ ಸೋನೆಯ ಪರಿಚಯಿಸಿ ಗುಡುಗಿವೆ ಹನಿಗಳು ಮಳೆಗಾಲವ ನೆನೆಸಿ! #ಕೆಲವೆಡೆ ಮಳೆ ✍️ ವಜ್ರದಂತ
ಕರಾಳ ಅಧ್ಯಯದ ನರ್ತನೆಯ ಛಿದ್ರಗೊಳಿಸಲು ರೌದ್ರನಾಗಿ ಬಾ, ಕಾರ್ಮೋಡಗಳ ಯುದ್ಧದಲ್ಲಿ ಬಲಭೀಮರಿಬ್ಬರ ಕಾಳಗದಂತೆ , ಸಾವಿನ ಎದೆಯಲ್ಲಿ ವಿರಸವ ಮೂಡಿಸಿ ಈ ಭುವಿಗೆ ಸಂತಸವ ಹರಡಲು ಮಾರ್ದನಿಸು ಬಾ! ಭಯದ ಛಾಯೆಯನ್ನಳಿಸಲು ಜಗದಲ್ಲಿ ಮಾಯೆಯ ಸರಿಸಲು ಭೀತಿಗೆ ಕೋಣೆಯಗಾಣಿಸಲು ರೌದ್ರರಮಣಿಯಾವಾಗಿ ಹರಿದು ಬಾ ಜಲಧಾರೆ ಬಿರಿದು ಬಾ! ✍️ ವಜ್ರದಂತ